ಗಣಿತದ ಸೀರೀಸ್ ಮುಂದು ವರಿಸುವ ಮುಂಚೆ ಕೆಲವು ಮುನ್ನುಡಿ. ಮೊದಲನೆಯದಾಗಿ ಕೆಲವು ಓದುಗರು ಫೋಟೊ ಎಡಿಟಿಸಲು ಯುನಿಕೋಡ್ ಬಳಸಿ ಎಂದು ಹೇಳಿದ್ದಾರೆ. ನನಗೆ ಇದು ಅರ್ಥವಾಗಲಿಲ್ಲ. ನಾನು ಮಾಡೋದು ಹೀಗೆ. ಕಾರ್ಟೂನ್ ಜಿಫ್ ಗಳನ್ನ ತೆಗೆದುಕೊಂಡು, ಅದರ ಇಂಗ್ಲಿಷ್ ಮಾತುಗಳನ್ನ ತೆಗೆದು, ಕನ್ನಡವನ್ನ ಟೈಪಿಸುತ್ತೇನೆ. ಕೆಲವೊಮ್ಮೆ ಸ್ವಲ್ಪ ಕತ್ತರಿಸು ಅಂಟಿಸುವ ಕೆಲಸ ಮಾಡಬೇಕಾಗುತ್ತೆ. ನಾನು ಮಾಡುವುದು ಹೀಗೆ. ಈ ಯುನಿಕೋಡ್ ಎಡಿಟಿಸೋದು ಅಂದರೆ ಏನು? ಯಾರಾದರೂ ದಯವಿಟ್ಟು ಸ್ವಲ್ಪ ವಿವರವಾಗಿ ಹೇಳುತ್ತೀರ? :)
ಇನ್ನು ಮುಂದೆ ಇಂದು ಭಾರತ ಇಂಗ್ಲಾಂಡ್ ವಿರುದ್ಧ ಎರಡೆನೆಯ ಟೆಸ್ಟ್ ಪಂದ್ಯದಲ್ಲಿ ತೇರ್ಗಡೆಯಾಗಿ ಸರಣಿಯಲ್ಲಿ 1-0 ಯ ಮುನ್ನಡೆ ಪಡೆದಿದೆ. ಕುಂಬ್ಳೆ 500 ವಿಕೆಟ್ ಪಡೆದ ಮೊದಲ ಭಾರತೀಯರಾಗಿದ್ದಾರೆ. ಮೊದಲನೆಯ ಟೆಸ್ಟ್ ನಲ್ಲಿ ಗೆಲುವು ಸಾಧನೆಯ ಬಗ್ಗೆ ಸ್ವಲ್ಪವೂ ಇಚ್ಛೆ ತೋರಿಸಲಿಲ್ಲವೆಂದು ಹೇಳಿದವರಿಗೆ ಒಳ್ಳೆಯ ಉತ್ತರ ನೀಡಿದೆ.
ಆದರೆ ಭಾರತೀಯ ಗೆಲುವಿನ ಕೆಲವು ಘಂಟೆಗಳ ಮುನ್ನ ನಡೆದ ಒಂದು ಆಟ ಜಗತ್ತಿನ ಕ್ರಿಕೆಟ್ ಆಸಕ್ತರ ಬಾಯಿಯಲ್ಲಿ ಇನ್ನೂ ಉಳಿದಿದೆ.
ನಿನ್ನೆ ನಡೆದ ಅಮೋಘ ಘಟನೆ -- ಆಸ್ಟ್ರೇಲಿಯ ೫೦ ಓವರ್ ಗಳಲ್ಲಿ 434ರನ್. ದಕ್ಷಿಣ ಆಫ್ರಿಕ ತಾವೇನೂ ಕಮ್ಮಿ ಇಲ್ಲವೆಂದು 49.5 ಓವರ್ ಗಳಲ್ಲಿ 438 ರನ್. ಅಬ್ಭಾ ಎಂತ ಅದ್ಭುತ ಸಾಧನೆ. ಈ ಮ್ಯಾಚ್ ನ ಹೈಲೈಟ್ಸ್ ನೋಡಿದೆ. ಹೊಸದಾಗಿ ಶುರುವಾಗಿರುವ 20-20 ಪಂದ್ಯದ ಹಾಗೆ ಇತ್ತು. ಪ್ರಾಯಶಃ ಈ 20-20 ಪಂದ್ಯಗಳ ಪ್ರಭಾವವೇ ಇರಬಹುದು. ಈ ಸರಣಿಯ ಮುಂಚೆ ದ.ಆ ಆಸ್ಟ್ರೇಲಿಯವನ್ನು 20-20 ಪಂದ್ಯದಲ್ಲಿ ಸೋಲಿಸಿದ್ದು ನಾವು ಇಲ್ಲಿ ಸ್ಮರಿಸಬಹುದು.
ಬೈ.ದಿ.ವೆ ಭಾರತ ಯಾವಾಗ 20-20 ಆಡುವುದು? ಅಥವ ಏಕ ದಿವಸೀಯ ಪಂದ್ಯಗಳು ಶುರುವಾದಾಗ ಮಾಡಿದ ತಪ್ಪನ್ನು ಈಗಲೂ ಮಾಡುವರ?
ಓ.ಕೆ. ಬ್ಲೇಡ್ ಸಾಕು. ಈಗ ಕಾರ್ಟೂನ್. ದ. ಆ ವಿರುದ್ಧ ಇದ್ದ ಸವಾಲಿನಂತೆ ದೊಡ್ಡದಲ್ಲದಿದ್ದರೂ ಯಾಕೋ ನಮ್ಮ ಕೇಶು 6+5ರನ್ನೂ ಕೂಡಿಸಲು...
Subscribe to:
Post Comments (Atom)
5 comments:
ಯೂನಿಕೋಡ್ ಬಗ್ಗೆ ವಿವರಣೆಗಾಗಿ ಹರಿ ಪ್ರಸಾದ್ ನಾಡಿಗ್ ಅವರನ್ನು ಸಂಪರ್ಕಿಸು. ನನಗೂ ಅವರು ಹೇಳಿದ್ದು ಅರ್ಥವಾಗಲಿಲ್ಲ...
BTW ಏನು ಕಾರ್ಟೂನ್ ಬ್ಲಾಗ್ನಲ್ಲಿ ಕ್ರಿಕೆಟ್ ಬಗ್ಗೆ ಬ್ಲೇಡ್ ಹಾಕಿದ್ದೀಯ ?? :P
ಆ ಮ್ಯಾಚ್ ನೋಡಿ ಫುಲ್ಲ್ ಊಸ್ಟ್ ಆಗೋದೆ. ಸೊಸೈಟಿ ಆಫ್ ಪ್ರಿವೆಂಶನ್ ಆಫ್ ಕ್ರೂಯಲ್ಟಿ ಟು ಬೌಲರ್ಸ್ ಶುರು ಮಾಡಬೇಕಾಗಬಹುದು. ಆದರೆ ನನ್ನ ಪ್ರಶ್ನೆ ಭಾರತ ಯಾವಾಗ 20-20 ಹೊಸ ಯುಗದ ಕ್ರಿಕೆಟ್ ಆಟವೆಂದು ಒಪ್ಪಿಕೊಳ್ಳುತ್ತೆ ಅಂತ. ಇಲ್ಲದಿದ್ದರೆ, ಬೇರೆಯವರು ನಮ್ಮ ಮೇಲೆ ಹೊಡೆದರೂ ನಾವು ಹೊಡೆಯುವ ಸಾಮರ್ಥ್ಯ ವಿರುವುದಿಲ್ಲ! :)
ಕ್ರಿಕೆಟ್ ಕಾಮೆಂಟ್ರಿ ಮಧ್ಯೆ ಕಾರ್ಟೂನ್ - ಸೂಪರ್ ಆಗಿದೆ ಅರುಣ. ನಿನ್ನ versionನಲ್ಲೇ ಒಂದು ಕಾರ್ಟೂನ್ ಬರೆಯಬಹುದು. ಹೇಗಿದ್ರೂ ನೀನು ಗಣಿತದಲ್ಲೂ ಮಾಸ್ಟರು. ಅಂದ ಹಾಗೆ ಡಾಕ್ಟರ್ ಆಗೋದಕ್ಕೆ ಇನ್ನೂ ಎಷ್ಟು ದಿನಗಳು ಬೇಕು.
ಅರುಣಿ,
ಈ ಯೂನಿಕೋಡ್ ಎಡಿಟಿಂಗ್ ಬಗ್ಗೆ ನನಗೆ ತಿಳಿದದ್ದು.
ಈಗ ನಾವು ಕಾರ್ಟೂನ್ಗಳ ಜಿಫ್ಗಳನ್ನು ಎಡಿಟ್ ಮಾಡಿ ಕನ್ನಡದಲ್ಲಿ ಟೈಪಿಸುತ್ತೇವೆ.ನಾನು ಹೀಗೆ ಮಾಡುವುದು MSಪೇಂಟ್ ನಲ್ಲಿ. ಅಲ್ಲಿ ಯೂನಿಕೋಡ್ ಸಪೋರ್ಟ್ ಇಲ್ಲ, ANSI ಮಾತ್ರ. ಇದರ ಬದಲಿಗೆ ಯೂನಿಕೋಡ್ ಸಪೋರ್ಟ್ ಇರುವ ಯಾವುದಾದರೂ ಬೇರೆ ಪೇಂಟ್ ಶಾಪ್ ಇಳಿಸಿಕೊಂಡು ಎಡಿಟ್ ಮಾಡುವ ಪ್ರಯತ್ನ ಮಾಡಬೇಕು.
ಸುಶಿ,
ನಾನು MSಪೈಂಟ್ ನಲ್ಲಿ ಯುನಿಕೋಡ್ ಜೊತೆಯೇ ಟೈಪಿಸೋದು. (ಬರಹದ ಸಹಾಯದಿಂದ). ಈ ಯುನಿಕೋಡ್ ಟೈಪಿಸೋದ್ರಿಂದ ಏನು ಲಾಭ?
Post a Comment