Search This Blog

Monday, July 17, 2006

ಕೇಶು ನಾಣಿ: ಕೇಶು ಟಿ.ವಿ

ಸ್ನೇಹಿತರೆ,

ಒಂದು ವಾರದ ವಿರಾಮದ ನಂತರ ಕೇಶು ನಾಣಿ ಮತ್ತೆ ಮರಳಿ ಬಂದಿದ್ದಾರೆ. ಈಗ ಕೇಶು ಒಂದು ಹೊಸ ಚಾನೆಲ್ ಪ್ರಾರಂಭಿಸಿದ್ದಾನೆ - ಕೇಶು ಟಿ.ವಿ ಎಂದು. ಇದರಲ್ಲಿ ನಿಮಗೆ ದಿನನಿತ್ಯದ ಟಿವಿಯಲ್ಲಿ ಬರುವ ಹುಚ್ಚು ಜಾಹಿರಾತುಗಳು. ಸಾವಿರಾರು ಚಾನೆಲ್ ಗಳಿದ್ದರೂ ಒಂದು ಒಳ್ಳೆ ಕಾರ್ಯಕ್ರಮ ಬಾರದಿದ್ದಾಗ ಆಗುವ ತಲೆ ನೋವು ಇತ್ಯಾದಿಗಳ ಬಗ್ಗೆ ವ್ಯಂಗ್ಯವಿದೆ. ಓದಿ ಆನಂದಿಸಿ ಮತ್ತು ಹೇಳ ಬೇಕೆ? - ಮಜ ಮಾಡಿ

Friday, July 07, 2006

ಕೇಶು ನಾಣಿ: ಸಮಯ ಯಂತ್ರ ೧೨ - ಅಂತಿಮ ಕಾರ್ಟೂನ್

ಸಮಯ ಯಂತ್ರ ಸೀರೀಸಿನಲ್ಲಿ ಇದು ಕೊನೆಯ ಕಾರ್ಟೂನು. ನಿಮಗೆ ಇಲ್ಲಿಯವರೆಗೂ ಪ್ರಕಟವಾದ ಕಾರ್ಟೂನುಗಳು ಇಷ್ಟವಾಗಿದೆಯೆ? ಹಾಗಾದರೆ ಟಿಪ್ಪಣಿ ಬರೆಯಲು ಮರೆಯದಿರಿ :)

Thursday, June 22, 2006

ಕೇಶು ನಾಣಿ: ಸಮಯ ಯಂತ್ರ ೭
@ದೀಪ್: ನಾನು ಅನುವಾದಿಸುವಾಗ ಸಾಧ್ಯವಾದಷ್ಟು ಮೂಲ ಕಾರ್ಟೂನನ್ನೇ ಅನುವಾದಿಸುತ್ತೇನೆ. ಕೆಲವೊಮ್ಮೆ ಸ್ವಲ್ಪ ಬದಲಾಯಿಸ ಬೇಕಾಗುತ್ತೆ. ಉದಾ: Tuna sandwich - ಇದು ನಾಣಿ/ಹಾಬ್ಬ್ಸ್ ಗೆ ಬಹಳ ಇಷ್ಟ. ಆದರೆ ನಮ್ಮಲ್ಲಿ ಟುನ ಸ್ಯಾಂಡ್ವಿಚ್ ಇರುತ್ತದೆಯೆ? ಅದರ ಬದಲು ಚಕ್ಲಿ ಕೋಡ್ಬಳೆ ಬಳಸಿದ್ದೇನೆ. ಇವುಗಳಿಗೆ ಹಾಕಿರುವ ಮಸಾಲೆ ಬಿಟ್ಟರೆ ಕಾರ್ಟೂನಿನ ಅಂಶಗಳಿಗೆ ಬೇರೇನೂ ಮಸಾಲೆ ಹಾಕಿಲ್ಲ :)

Thursday, June 15, 2006

ಕೇಶು ನಾಣಿ: ಸಮಯ ಯಂತ್ರ ೫

ಹುಲಿಗಳನ್ನು ಪಟಾಸುವುದಕ್ಕೆ ಹೊಸ ವಿಧಾನ -- ನೆನಪಿಡಿ ಹುಡುಗಿ ಅಲ್ಲ ಹುಲಿ! :D

Wednesday, June 14, 2006

ಕೇಶು ನಾಣಿ - ಸಮಯ ಯಂತ್ರ ೪

ಸದಾಶಿವನಿಗೆ ಅದೇ ಧ್ಯಾನ ಅಂದ ಹಾಗೆ ನಮ್ಮ ನಾಣಿಗೆ ತಿನ್ನುವುದೇ ಧ್ಯಾನ!

Monday, June 12, 2006

ಕೇಶು ನಾಣಿ: ಸಮಯ ಯಂತ್ರ ೩ - ತಿಂಡಿ ಪೋತ ನಾಣಿ

ತಿಂಡಿ ಪೋತ ನಾಣಿ :D. ತಿಂಡಿ ಸಿಕ್ಕಿದರೆ ಎಲ್ಲಿಗೆ ಬೇಕಾದರೂ ಹೋಗೋಕ್ಕೆ ರೆಡಿ.ಪ್ರತಿಕ್ರಿಯೆ:

ಶ್ರೀ ಅನಾಮಧೇಯರೆ,
ನೀವು ಯಾರು ಅಂತ ನನಗೆ ಗೊತ್ತಿಲ್ಲ. ನೀವು ಕಡೇ ಪಕ್ಷ ನಿಮ್ಮ ಹೆಸರನ್ನಾದರೂ ಬಿಟ್ಟಿದ್ದರೆ ಚೆನ್ನಾಗಿರುತಿತ್ತು. ಸಂಬೋಧಿಸಲು ಸುಲಭವಾಗುತಿತ್ತು. ಏನೇ ಇರಲಿ, ನಿಮ್ಮ ಟೀಕೆಗೆ ಧನ್ಯವಾದಗಳು. ಮೊದಲಿಗೆ ಈ ಕಾರ್ಟೂನುಗಳು ಖಂಡಿತವಾಗಿಯೂ ಮಾಡರ್ನ್ ಆರ್ಟ್ ತರಹ ಅಲ್ಲ. ಇವು ಚಿಕ್ಕ ಮನಸಿನ್ನ ಬಗ್ಗೆ, ಮಕ್ಕಳ ಬಗ್ಗೆ, ಅವರ ವಿಚಾರಗಳ ಬಗ್ಗೆ ಬರೆದ ಕಾರ್ಟೂನುಗಳು. ನೀವು ಒಮ್ಮೆ ಎಲ್ಲಾ ಕಾರ್ಟೂನುಗಳು, ಸ್ಪೆಷಲಾಗಿ ಗಣಿತದ ಸೀರೀಸನ್ನು ಓದಿ ಎಂದು ಪ್ರಾರ್ಥಿಸುತ್ತೇನೆ. ಖಂಡಿತವಾಗಿಯೂ ನ್ಮಗೆ ಹಾಸ್ಯ ವ್ಯಂಗ್ಯ ಎರಡೂ ಕಾಣುತ್ತೆ. ಈ ಕಾರ್ಟೂನುಗಳನ್ನು ಬರೆದವರ ಒದ್ದೇಶವೇ ವ್ಯಂಗ್ಯ. ಅದರಲ್ಲೂ ದೊಡ್ಡವರ ಮನಸ್ಸಿನ ಗೊಂದಲ, ಚಿಕ್ಕವರ/ಮಕ್ಕಳ ಮನಸ್ಸಿನ ಪರಿಚಯ ಜೊತೆಗೆ ಚಿಕ್ಕವರಿಗೂ ದೊಡ್ಡವರಿಗೂ ಮನಸಿನಲ್ಲಿ ಇರುವ ಅಂತರ.
ಇನ್ನೊಂದು ವಿಷಯ. ನೀವು ನಗಲೇ ಬಾರದು ಎಂದು ಈ ಕಾರ್ಟೂನನ್ನು ಓದಿದರೆ ಅದರಲ್ಲಿ ಖಂಡಿತವಾಗಿಯೂ ಹಾಸ್ಯ ಕಾಣಿಸುವುದಿಲ್ಲ. ಸ್ವಲ್ಪ ಮಕ್ಕಳ ಮನಸ್ಸಿನ ದೃಷ್ಟಿಯಲ್ಲಿ ಓದಿದರೆ ಉತ್ತಮ ವಾಗುತ್ತೆ :)

Thursday, June 08, 2006

ಕೇಶು ನಾಣಿ -- ಸಮಯ ಯಂತ್ರ

ಸ್ನೇಹಿತರೆ,

ಇಷ್ಟು ದಿನ ಕೇಶು ನಾಣಿ ಎಲ್ಲಿಗೆ ಹೋಗಿದ್ದರು ಎಂದು ಯೋಚಿಸುತ್ತಿದ್ದ್ರ? ಒಂದು ದೊಡ್ಡ ಕಾಲ ಪ್ರಯಾಣ ಮಾಡಿ ಬಂದರು. ಅದಕ್ಕೇ ಬ್ರೇಕ್ ತೆಗೆದುಕೊಂಡಿದ್ದರು :). ಈಗ ನೋಡಿ ಪೂರ್ಣ ಕಥೆಯನ್ನುಈ ಕಾರ್ಟೂನಿನ ಅನುವಾದವನ್ನು ನಾನು ಬಹಳ ಹಿಂದೆಯೇ ಮಾಡಿದ್ದೆ. ಇದನ್ನು ಕನ್ನಡ ಆಡಿಯೋ ಡಾಟ್ ಕಾಮ್ ನಲ್ಲಿ ಕೂಡ ಹಾಕಲಾಗಿತ್ತು. ಅಲ್ಲಿ ನೋಡಿ ಇಲ್ಲಿ ಮತ್ತೊಮ್ಮೆ ಓದಲು ಬೇಜಾರಾದರೆ ಕ್ಷಮೆ ಇರಲಿ. ಈ ಸೀರೀಸ್ ಮುಗಿದ ಬಳಿಕ ಹೊಸ ಸೀರೀಸ್ ಶುರು ಮಾಡುತ್ತೇನೆ. ಅಲ್ಲಿಯವರೆಗೂ ಕಾಲ ಪ್ರಯಾಣ ಮಾಡಿ ಬನ್ನಿ :)

Wednesday, May 03, 2006

ಕೇಶು ನಾಣಿ -- ಮಜ ಸೀರೀಸ್ ಮುಗಿಸುತ್ತಾ....

ಮುಖ್ಯವಾದ ವಿಚಾರವನ್ನು ಬಹಳ ತುಂಬಾ ಮುಖ್ಯವಾದ ವಿಚಾರ ಮಾಡುವುದು ಹೇಗೆ ಎಂದು ನಿಮಗೆ ತಿಳಿದಿದೆಯೆ? ಇಲ್ಲವೆ? ಹಾಗಾದರೆ ನಮ್ಮ ಕೇಶುವಿನಿಂದ ಕಲಿಯಿರಿ... ಇದನ್ನ ಮನೆನಲ್ಲಿ ಪ್ರಯತ್ನಿಸಿ, ಆಮೇಲೆ ರೆಸಲ್ಟ್ ನ ಇಲ್ಲ್ ಹಾಕಲು ಮರೀಬೇಡಿ :D

Tuesday, May 02, 2006

Dilbert - Vacation

ಸಾಂಬನ ಜೊತೆಗಾರ ವೆಂಕಟಾಚಲ aka ವೆಂಕುವಿನ ಚಾಣಾಕ್ಷತೆಗೆ ಸರಿಸಾಟಿ ಯಾರೂ ಇಲ್ಲವೇನೋ ಅನ್ನಬಹುದು.
ಬೇಕಿದ್ರೆ ನೀವೇ ನೋಡಿ!

ಕೇಶು ನಾಣಿ -- ಮಜ ೮

ಮಜ ಸೀರೀಸ್ ನಲ್ಲಿಯ ಉಪಾಂತಿಮ ಕಾರ್ಟೂನ್ ಇದು. ಬೌಲರ್ ಬ್ಯಾಟ್ಸ್‌ಮನ್ ಇಬ್ಬರೂ ಔಟಾಗುವುದನ್ನ ಕಂಡಿದ್ದೀರ? ಇಗೋ ನೋಡಿ.
ಇತ್ತೀಚೆಗೆ ನಮ್ಮ ಕಾರ್ಟೂನ್ ಬ್ಲಾಗಿಗೆ ಒಳ್ಳೆ ಪ್ರತಿಕ್ರಿಯೆ ದೊರೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಇದಕ್ಕೆ ನಾವು ಮೂವರೂ ನಿಮ್ಮೆಲ್ಲರಿಗೂ ಚಿರಋಣಿಗಳು. ಹೀಗೆಯೇ ನಿಮ್ಮ ಪ್ರೋತ್ಸಾಹವಿರಲಿ. ನಿಮಗೆ ಏನು ಅನ್ನಿಸುವುದೋ ಅದನ್ನ ಸಂಕೋಚವಿಲ್ಲದೇ ಪ್ರತಿಕ್ರಯಿಸಿ. ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು.

ಕೆಲವರು ಕನ್ನಡದಲ್ಲಿ ಟೈಪಿಸುವುದು ಹೇಗೆ ಎಂಬುವ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಇದು ಬಹಳ ಸುಲಭ. ಅಂತರ್ಜಾಲದಲ್ಲಿ ಸಾಕಷ್ಟು ಮಾಹಿತಿ ಇದ್ದರೂ ಇಲ್ಲಿ ಮತ್ತೊಮ್ಮೆ ಪೋಸ್ಟಿಸುವೆ. ಇದನ್ನ ಓದಿ ಕೆಲವರು ಕನ್ನಡದಲ್ಲಿ ಟೈಪಿಸುವುದಾದರೆ ಅದೇ ಖುಷಿ :)

೧. ಮೊದಲಿಗೆ ನೀವು ಯುನಿಕೋಡ್ ಸೌಲತ್ತನ್ನು ಬಳಸಬೇಕು. ಇದಕ್ಕೆ ದಯವಿಟ್ಟು ಈ ಕೊಂಡಿಯ ಸಹಾಯ ಪಡೆಯಿರಿ
http://sampada.net/fonthelp
ಯುನಿಕೋಡ್ ಸೌಲತ್ತನ್ನು ಸಮರ್ಥಗೊಳಿಸಿದ ನಂತರ ನೀವು ಬರಹವನ್ನು ಇಂಸ್ಟಾಲಿಸಿ. http://www.baraha.com
ಬರಹದಲ್ಲಿ ನೇರ ಬರಹವೆಂಬ ಕಾರ್ಯಕ್ರಮವಿದೆ. ಇದನ್ನು ಬಳಸಿ ನೀವು ಕನ್ನಡ ಟೈಪಿಸಬಹುದು. ಆದರೆ ಇದು ಮಾಡುವುದಕ್ಕೆ ನಿಮ್ಮ ಕಂಪ್ಯೂಟರ್ ನಲ್ಲಿ ಯೂನಿಕೋಡ್ ಸೌಲತ್ತಿರಬೇಕು. ಇನ್ನೂ ಹೆಚ್ಚು ವಿವರ ಬೇಕಾದಲ್ಲಿ ನನಗೆ ಇ-ಮೈಲ್ ಮಾಡಿ

೨. ಶ್ರೀಯುತ ಪ್ರಶಾಂತ ಸಿ.ಎಮ್ ರವರೆ: ನಿಮ್ಮ ಪ್ರತಿಕ್ರಿಯೆಗೆ ಬಹಳ ಧನ್ಯವಾದಗಳು. ಈ ತಡವಾದ ಉತ್ತರಕ್ಕೆ ಕ್ಷಮೆ ಇರಲಿ. ಆದರೆ ಪ್ರಾಯಶಃ ನಿಮಗೆ ಈ ಬ್ಲಾಗಿನ ಸಂಪೂರ್ಣ ಧ್ಯೇಯ ಅರ್ಥವಾಗಿಲ್ಲ ಎಂದು ಕಾಣಿಸುತ್ತೆ. ಇಲ್ಲಿ ನಾವು ಕೇವಲ ಅನುವಾದಿಸುತ್ತಿದ್ದೇವೆ. ಈ ಹೆಸರಾಂತ ಕಾರ್ಟೂನುಗಳು ಇನ್ನೂ ಹೆಚ್ಚು ಜನರಿಗೆ ತಲುಪುವ ಹಾಗೆ ಮಾಡಬೇಕು ಎನ್ನುವುದು ಈ ಬ್ಲಾಗಿನ ವಿಚಾರ. ಅದಕ್ಕೇ ನಿಮಗೆ ಇಲ್ಲಿ ಒರಿಜಿನಲ್ ಕಾರ್ಟೂನ್ಗಳು ಕಾಣಿಸುವುದಿಲ್ಲ. ಕನ್ನಡದಲ್ಲಿ ಒರಿಜಿನಲ್ ಕಾರ್ಟೂನ್ಗಳು ಬರೆಯುವರು ಬೇಕಾದಷ್ಟು ಜನ ಇದ್ದಾರೆ. ಅವರ ವೆಬ್ ಸೈಟಿಗೊಮ್ಮೆ ದಯವಿಟ್ಟು ಭೇಟಿ ಕೊಡಿ.

-- ಇದು ನೋಡಿ ಶಷಿಯವರ ಕಾರ್ಟೂನುಗಳು
http://shakricartoons.blogspot.com/

-- ಜನಾರ್ಧನ ಸ್ವಾಮಿಯವರ ಕಾರ್ಟೂನುಗಳು
http://66.34.165.181/js//cartoons/

ಇವು ನನಗೆ ತಕ್ಷಣಕ್ಕೆ ಹೊಳೆಯುವ ಸೈಟುಗಳು -- ಒಮ್ಮೆ ನೋಡಿ ನಿಮ್ಮ ಪ್ರತಿಕ್ರಿಯೆಯನ್ನು ಲೇಖಕರಿಗೆ ತಿಳಿಸಿ.

ಆದರೆ ನಿಮ್ಮ ಟಿಪ್ಪಣಿಯನ್ನು ಒಂದು ಕಡೆ ತಲೆಯಲ್ಲಿ ಇಟ್ಟುಕೊಂಡಿರುತ್ತೇನೆ. ಒರಿಜಿನಲ್ ಕಾರ್ಟೂನ್ ಮಾಡಲು ತೊಂದರೆ ಎಂದರೆ ಚಿತ್ರಗಳನ್ನು ಬರೆಯುವುದು. ಮುಂದೆ ಯಾರಾದರೂ ಇಲ್ಲಸ್ಟ್ರೇಟರ್ ಸಿಕ್ಕಿದರೆ ಖಂಡಿತವಾಗಿಯೂ ಮಾಡುತ್ತೇನೆ. ಸಧ್ಯಕ್ಕೆ ಕೇಶು ನಾಣಿಯರ ಜೊತೆ ಆಟವಾಡುತ್ತೇನೆ :)

ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು

Friday, April 28, 2006

ಕೇಶು ನಾಣಿ: ಮಜ ೭

ಮಜ ಮಾಡ್ತಾ ಅ,ಆ,ಇ,ಈ ಕಲಿಯೋದು ನಿಮಗೆ ಗೊತ್ತೆ? ನೋಡಿ ಕೇಶು ಅವರಪ್ಪನ ಜೊತೆ ಬೇಸ್ ಬಾಲ್ ಆಡ್ತಾ ಕಲೀತಾ ಇದಾನೆ :)

Wednesday, April 26, 2006

ಕೇಶು ನಾಣಿ: ಮಜ - ೬

ಕೇಶು ಟಾರ್ಜನ್ ಆಗಿದ್ದಾನೆ. ಸುಶಿ ಜೇನ್ ಅಂತೆ :)

Friday, April 21, 2006

ಕೇಶು-ನಾಣಿ --> ೨೫ನೇ ಕಾರ್ಟೂನು

ಇವತ್ತು ಕೇಶು ನಾಣಿಯವರ ೨೫ನೇ ಕಾರ್ಟೂನನ್ನು ಪೋಸ್ಟಿಸುತ್ತಿದ್ದೇನೆ. ನಿಮ್ಮೆಲ್ಲರ ಇಲ್ಲಿಯವರೆಗಿನ ಪ್ರೋತ್ಸಾಹ ಹಾಗು ಮೆಚ್ಚುಗೆಗೆ ನಾನು ಚಿರಋಣಿ. ಇಷ್ಟು ಕಡಿಮೆ ಸಮಯದಲ್ಲಿ ನಾವು ಮೂವರು ೫೦ಕ್ಕೂ ಹೆಚ್ಚು ಕಾರ್ಟೂನುಗಳನ್ನು ಹಾಕಿದ್ದೇವೆ ಎಂಬುದನ್ನು ನಂಬಲು ಕಷ್ಟ. ಸಕ್ಕ್ಸೆಫುಲ್ಲಿ ರನ್ನಿಂಗ್ ಫಾರ್ ೫೦ ಡೇಸ್ ಅಂತ ಒಂದು ಪೋಸ್ಟರ್ ಮಾಡಿಸ ಬಹುದು. ನೋಡಲು ಮರೆಯದಿರಿ -- ಕನ್ನಡ ಕಾರ್ಟೂನುಗಳು
ವಿ ಸೂ: ಇಲ್ಲಿ ಮತ್ತೊಮ್ಮೆ ನಾನು ಈ ಕಾರ್ಟೂನುಗಳ ಮೂಲ ಕರ್ತೃಗಳಾದ ಬಿಲ್ ವಾಟರ್‌ಸನ್, ಜಿಮ್ ಡೇವಿಸ್ ಮತ್ತು ಸ್ಕಾಟ್ ಆಡಮ್ಸ್ ರವರಿಗೆ ಈ ರೀತಿಯಲ್ಲಿ ಪರೋಕ್ಷವಾಗಿ ಧನ್ಯವಾದ ಹೇಳಲು ಇಚ್ಛಿಸುತ್ತೇನೆ

Thursday, April 20, 2006

Wednesday, April 19, 2006

ಕೇಶು ನಾಣಿ: ಮಜ - ೩

ಕೇಶು ನಾಣಿಗೆ ಇರುವೆಗಳ ಹುಚ್ಚತನವನ್ನು ತೋರಿಸುತ್ತಿದ್ದಾನೆ... ಆಮೇಲೆ ಅವನೇ ಆ ಹುಚ್ಚತನವನ್ನ.........

Tuesday, April 18, 2006

ಕೇಶು ನಾಣಿ -- ಮಜ ೨

ಮಜ ಸೀರೀಸ್ ಮುಂದುವರಿಸುತ್ತಾ. ಕೇಶುನ ಅವರ ಅಪ್ಪ ಹೊರಗಡೆ ಹೋಗಿ ಆಟಾಡು ಅಂತ ಕಳಿಸಿದ್ದಾರೆ. ಅವನು ಮಜ ಮಾಡೊಲ್ಲ ಅಂತ ಪಣ ತೊಟ್ಟಿದ್ದಾನೆ. ಈಗ ಓದಿ...

Tuesday, April 11, 2006

ಕೇಶು ನಾಣಿ -- ಮಜ ಸೀರೀಸ್

ಹೊಸ ವರ್ಷ ಹೊಸ ಕಾರ್ಟೂನುಗಳು. ಕೆಲ ದಿನಗಳಿಂದ ಸ್ವಲ್ಪ ಬಿಜಿಯಾಗಿದ್ದೆ -- ಮನೆ ಶಿಫ್ಟಿಂಗ್, ಪ್ರಾಜೆಕ್ಟ್ ಕೆಲಸ; ಹಾಗಾಗಿ ಕಾರ್ಟೂನುಗಳನ್ನ ಹಾಕಲು ಆಗಿರಲಿಲ್ಲ. ಈಗ ಹಾಕುತ್ತಿದ್ದೇನೆ. ನೋಡಿ ಆನಂದಿಸಿ.

ವಿ. ಸೂ: ಕನ್ನಡ ಆಡಿಯೋ ಸದಸ್ಯರು ಈ ಕಾರ್ಟೂನುಗಳನ್ನ ಆಗಲೇ ಓದಿರಬಹುದು. ಆದರೂ ಇನ್ನೊಮ್ಮೆ ಓದಲು ತೊಂದರೆ ಇಲ್ಲ ಎಂದು ನಂಬಿದ್ದೇನೆ

Friday, March 24, 2006