Search This Blog

Friday, March 24, 2006

ಗೋವಿಂದ - ನಿದ್ದೆ

Dilbert : Insurance

ಇಂದಿಗೆ ಹಳೆಯ ಎಲ್ಲ ಕಾರ್ಟೂನುಗಳೂ ಮುಗಿದವು. ಇನ್ನು ಮುಂದೆ ಹೊಸ ಹೊಸ ಕಾರ್ಟೂನುಗಳನ್ನು ಎದುರು ನೋಡಿ :)

Thursday, March 23, 2006

Dilbert : ಸುಕೇಶಿ

ಟೀನಾ ಇಲ್ಲಿ ಸುಕೇಶಿಯಾಗಿದ್ದಾಳೆ. CTC ಮತ್ತೆ ತಮ್ಮ ಮೂಲಪಾತ್ರವನ್ನು ನಿರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ!

Wednesday, March 22, 2006

Dilbert : ವೆಂಕು

ಇನ್ನಷ್ಟು ವೆಂಕು ಮಹಾತ್ಮೆ!

Tuesday, March 21, 2006

Dilbert : ನಿದ್ದೆ

ವೆಂಕಟಾಚಲ ಬೇಡದಿರೋ ಮೀಟಿಂಗುಗಳಲ್ಲಿ ಭಾಗಿಯಾಗೋದಲ್ಲದೆ ತನ್ನದೇ ಮೀಟಿಂಗಿನಲ್ಲಿ ನಿದ್ದೆ ಹೋಗೋದು ಹೀಗೆ ನೋಡಿ!

Monday, March 20, 2006

ಗೋವಿಂದ - Food Chain

ಗೋವಿಂದನ ಖಾರದ ರೊಟ್ಟಿ = Garfield's Pizza :)

Friday, March 17, 2006

ಕೇಶು ಮತ್ತು ನಾಣಿ ಗಣಿತ ಸೀರೀಸ್ ಸಮ್ಮರಿ

ಗಣಿತ ಸೀರೀಸಿನ ಎಲ್ಲಾ ಕಾರ್ಟೂನ್ಗಳನ್ನ ಒಟ್ಟಿಗೆ ಹಾಕುತ್ತಿದ್ದೇನೆ. ಒಟ್ಟಿಗೆ ಎಲ್ಲಾ ಓದುವುದಕ್ಕೆ ಸುಲಭವಾಗುತ್ತದೆ :)

















ಕೇಶು & ನಾಣಿ -- ಗಣಿತದ ಸೀರೀಸ್ ಮುಗಿಸುತ್ತಾ

ನಿನ್ನೆಯೇ ಹೇಳಿದ ಹಾಗೆ ಇಂದಿನ ಕಾರ್ಟೂನ್ ಜೊತೆಗೆ ಗಣಿತದ ಸೀರೀಸ್ ಮುಗಿಯಿತು. ಕೇಶವ ಮತ್ತು ನಾಣಿ ಮತ್ತೆ ಮುಂದಿನ ವಾರ ಹೊಸ ಸೀರೀಸ್ ನಲ್ಲಿ ಬರಲಿದ್ದಾರೆ :) ಅಲ್ಲಿಯವರೆಗೆ ಈ ಕಾರ್ಟೂನ್. ಈ 18 ಕಾರ್ಟೂನ್ ಇರುವ ಸೀರೀಸ್‌ನಲ್ಲಿ ನಿಮಗೆ ಹಿಡಿಸಿದ್ದು/ಹಿಡಿಸದಿದ್ದದ್ದು ಏನಾದರು ಇದ್ದರೆ ಪ್ರತಿಕ್ರಿಯೆಗಳನ್ನು ಹಾಕಲು ಮರೆಯದಿರಿ

ಗೋವಿಂದ - Being Positive

Dilbert : Interview

* ಪ್ರತಿ ಭಾನುವಾರ ಕಲರ್ ಕಾರ್ಟೂನ್ ಪ್ರಕಟಿಸುವುದು ವಾಡಿಕೆ.ನಮಗೆ ವೀಕೆಂಡ್ ರಜೆಯಿರುವುದರಿಂದ ಬಣ್ಣಬಣ್ಣದ ಕಾರ್ಟೂನ್ ಶುಕ್ರವಾರಕ್ಕೆ ಮೀಸಲು!
ಕೆಲಸದ ಸಂದರ್ಶನದಲ್ಲಿ ನಮ್ಮ CTC ನುರಿತ ಇಂಜಿನಿಯರ್‍ನ ಹುಡುಕಾಟದಲ್ಲಿದ್ದಾರೆ.ಆದರೆ ಸಂದರ್ಶನಕ್ಕೆ ಬಂದ ವ್ಯಕ್ತಿಯ ವಿಶೇಷಣಗಳನ್ನು ಗಮನಿಸಿ!

Thursday, March 16, 2006

ಟೆಸ್ಟ್ ಮುಗಿಯಿತು

ಕಡೆಗೂ ಗಣಿತದ ಟೆಸ್ಟ್ ಮುಗಿಯಿತು. ಇದು ಈ ಸೀರೀಸ್ ನಲ್ಲಿ ಉಪಾಂತಿಮ ಕಾರ್ಟೂನ್ :)



ಶ್ರೀನಿ ಸಾರ್ ಗೆ ಡಿವಿಗಳು -- ಫೋಟೋಲಿ ಇದ್ದ ತಪ್ಪನ್ನು ತಿದ್ದಿದ್ದಕ್ಕೆ :)

Dilbert : Project Status Report

ನಮ್ಮ CTC / ಛಾಮಯ್ಯನೋರನ್ನ ಅಚ್ಚಕನ್ನಡದಲ್ಲಿ ಬೈಸಿದ್ರೆ ಹೇಗಿರಬಹುದೆಂಬ ಕಲ್ಪನೆಯಲ್ಲಿ ಮೂಡಿಬಂದದ್ದು ಇದು.ನೀವು ನೋಡಿ ಆನಂದಿಸಿ! :)

Wednesday, March 15, 2006

ಗೋವಿಂದ - Car trip


This reminds me of my friend Karthik, and his car trips ;)

@Karthik, No offense meant :)

Dilbert : HammerHead

Hammerhead Bob ಇಲ್ಲಿ ಸುತ್ತಿಗೆತಲೆ ಸೀನನಾಗಿದ್ದಾನೆ. ಇವನು ಒಂಥರಾ irritAting ಕ್ಯಾರೆಕ್ಟರ್ರು.ಇವ್ನು ಹೋದ ಕಡೆ ಎಲ್ಲ ಜನ ಕಲ್ಲು ತಗೊಂಡು ಹೊಡೆಯೋ ಸ್ಟೇಜಿಗೆ ತಲೆ ಕೊರೀತಾನೆ. ಬೇಕಿದ್ರೆ ನೀವೇ ನೋಡಿ

Tuesday, March 14, 2006

ಕೇಶು ಮತ್ತು ಗಣಿತ

ಗಣಿತದ ಟೆಸ್ಟ್ ಮುಗಿದ ಮೇಲೆ...

Dilbert : Tech Support

ಸಾಂಬನನ್ನು ಕಷ್ಟದ ಪರಿಸ್ಥಿತಿಯಿಂದ ಸದಾ ಕಾಪಾಡುವುದು ನಮ್ಮ ಟಾಮಿಶಿವ. ಮೂಲ Dogbert ಆಗಿದ್ದು ಇಲ್ಲಿ ಸಾಂಬಶಿವನಿಗೆ ಜೊತೆಯಾಗಿ ಟಾಮಿಶಿವನಾಗಿದ್ದಾನೆ!

Monday, March 13, 2006

ಅಂತರಿಕ್ಷದಲ್ಲಿ ೬+೫ ಕೂಡಿಸಿದ ಕೇಶು...

ಗಣಿತದ ಸೀರೀಸ್ ಮುಂದು ವರಿಸುವ ಮುಂಚೆ ಕೆಲವು ಮುನ್ನುಡಿ. ಮೊದಲನೆಯದಾಗಿ ಕೆಲವು ಓದುಗರು ಫೋಟೊ ಎಡಿಟಿಸಲು ಯುನಿಕೋಡ್ ಬಳಸಿ ಎಂದು ಹೇಳಿದ್ದಾರೆ. ನನಗೆ ಇದು ಅರ್ಥವಾಗಲಿಲ್ಲ. ನಾನು ಮಾಡೋದು ಹೀಗೆ. ಕಾರ್ಟೂನ್ ಜಿಫ್ ಗಳನ್ನ ತೆಗೆದುಕೊಂಡು, ಅದರ ಇಂಗ್ಲಿಷ್ ಮಾತುಗಳನ್ನ ತೆಗೆದು, ಕನ್ನಡವನ್ನ ಟೈಪಿಸುತ್ತೇನೆ. ಕೆಲವೊಮ್ಮೆ ಸ್ವಲ್ಪ ಕತ್ತರಿಸು ಅಂಟಿಸುವ ಕೆಲಸ ಮಾಡಬೇಕಾಗುತ್ತೆ. ನಾನು ಮಾಡುವುದು ಹೀಗೆ. ಈ ಯುನಿಕೋಡ್ ಎಡಿಟಿಸೋದು ಅಂದರೆ ಏನು? ಯಾರಾದರೂ ದಯವಿಟ್ಟು ಸ್ವಲ್ಪ ವಿವರವಾಗಿ ಹೇಳುತ್ತೀರ? :)

ಇನ್ನು ಮುಂದೆ ಇಂದು ಭಾರತ ಇಂಗ್ಲಾಂಡ್ ವಿರುದ್ಧ ಎರಡೆನೆಯ ಟೆಸ್ಟ್ ಪಂದ್ಯದಲ್ಲಿ ತೇರ್ಗಡೆಯಾಗಿ ಸರಣಿಯಲ್ಲಿ 1-0 ಯ ಮುನ್ನಡೆ ಪಡೆದಿದೆ. ಕುಂಬ್ಳೆ 500 ವಿಕೆಟ್ ಪಡೆದ ಮೊದಲ ಭಾರತೀಯರಾಗಿದ್ದಾರೆ. ಮೊದಲನೆಯ ಟೆಸ್ಟ್ ನಲ್ಲಿ ಗೆಲುವು ಸಾಧನೆಯ ಬಗ್ಗೆ ಸ್ವಲ್ಪವೂ ಇಚ್ಛೆ ತೋರಿಸಲಿಲ್ಲವೆಂದು ಹೇಳಿದವರಿಗೆ ಒಳ್ಳೆಯ ಉತ್ತರ ನೀಡಿದೆ.

ಆದರೆ ಭಾರತೀಯ ಗೆಲುವಿನ ಕೆಲವು ಘಂಟೆಗಳ ಮುನ್ನ ನಡೆದ ಒಂದು ಆಟ ಜಗತ್ತಿನ ಕ್ರಿಕೆಟ್ ಆಸಕ್ತರ ಬಾಯಿಯಲ್ಲಿ ಇನ್ನೂ ಉಳಿದಿದೆ.

ನಿನ್ನೆ ನಡೆದ ಅಮೋಘ ಘಟನೆ -- ಆಸ್ಟ್ರೇಲಿಯ ೫೦ ಓವರ್ ಗಳಲ್ಲಿ 434ರನ್. ದಕ್ಷಿಣ ಆಫ್ರಿಕ ತಾವೇನೂ ಕಮ್ಮಿ ಇಲ್ಲವೆಂದು 49.5 ಓವರ್ ಗಳಲ್ಲಿ 438 ರನ್. ಅಬ್ಭಾ ಎಂತ ಅದ್ಭುತ ಸಾಧನೆ. ಈ ಮ್ಯಾಚ್ ನ ಹೈಲೈಟ್ಸ್ ನೋಡಿದೆ. ಹೊಸದಾಗಿ ಶುರುವಾಗಿರುವ 20-20 ಪಂದ್ಯದ ಹಾಗೆ ಇತ್ತು. ಪ್ರಾಯಶಃ ಈ 20-20 ಪಂದ್ಯಗಳ ಪ್ರಭಾವವೇ ಇರಬಹುದು. ಈ ಸರಣಿಯ ಮುಂಚೆ ದ.ಆ ಆಸ್ಟ್ರೇಲಿಯವನ್ನು 20-20 ಪಂದ್ಯದಲ್ಲಿ ಸೋಲಿಸಿದ್ದು ನಾವು ಇಲ್ಲಿ ಸ್ಮರಿಸಬಹುದು.

ಬೈ.ದಿ.ವೆ ಭಾರತ ಯಾವಾಗ 20-20 ಆಡುವುದು? ಅಥವ ಏಕ ದಿವಸೀಯ ಪಂದ್ಯಗಳು ಶುರುವಾದಾಗ ಮಾಡಿದ ತಪ್ಪನ್ನು ಈಗಲೂ ಮಾಡುವರ?

ಓ.ಕೆ. ಬ್ಲೇಡ್ ಸಾಕು. ಈಗ ಕಾರ್ಟೂನ್. ದ. ಆ ವಿರುದ್ಧ ಇದ್ದ ಸವಾಲಿನಂತೆ ದೊಡ್ಡದಲ್ಲದಿದ್ದರೂ ಯಾಕೋ ನಮ್ಮ ಕೇಶು 6+5ರನ್ನೂ ಕೂಡಿಸಲು...

ಗೋವಿಂದ - KA Radio

This cartoon strip is dedicated to the first ever and only Kannada online radio -- Kannada Kasthuri a.k.a. KA radio :)

ಮೂಲ: ಜಿಮ್ ಡೇವಿಸ್.
ಕನ್ನಡಕ್ಕೆ: ಪ್ರಶಾಂತ ಎಂ.

Dilbert : Disloyal

ವೆಂಕುವಿನ ಕೃತ್ರಿಮಬುದ್ಧಿಯನ್ನು ನೋಡ್ತಾ ನೋಡ್ತಾ ನಮ್ಮ ಸಾಂಬು ಪಾಪ ಮೈ ಪರಚಿಕೊಳ್ಳೋ ಸ್ಥಿತಿಗೆ ಹೋಗ್ತಾನೆ.

Friday, March 10, 2006

ಗೋವಿಂದ - ಜೂಟಾಟ

ಇಂಗ್ಲಿಷ್‍ನ Garfield ಗೋವಿಂದನಾದರೆ, ಅವನ ಗೆಳೆಯ Oddie - ಉದ್ದಂಡನಾಗಿ ಬರುತ್ತಿದ್ದಾನೆ.

ಕ್ಯಾಪ್ಟೆನ್ ಕೆಂಪಣ್ಣ ಅಂತರಿಕ್ಷದಲ್ಲಿ...

ಇಂದು ಶುಕ್ರವಾರ ಆಗಿರುವುದರಿಂದ ಸ್ವಲ್ಪ ಬೇಗನೇ ಕಾರ್ಟೂನ್ ಹಾಕಿ ಬಿಡುತ್ತಿದ್ದೇನೆ. ವಾರಾಂತ್ಯದಲ್ಲಿ ಹಾಕಲು ಆಗುವುದಿಲ್ಲ. ಸೋಮವಾರ ಮುಂದುವರಿಸುತ್ತೇನೆ.

ಬೈ ದಿ ವೆ, ನೀವೂ ಕೇಶು ಜೊತೆ ಗಣಿತ ಕಲಿಯುತ್ತಿದ್ದೀರ?


ವಿ ಸೂ: ಆತುರದಲ್ಲಿ ನಿನ್ನೆಯ ಕಾರ್ಟೂನನ್ನು ಮತ್ತೆ ಅಪ್ಲೋಡಿಸಿದ್ದೆ. ಈ ಅಡಚನೆಗಾಗಿ ಕ್ಷಮಿಸಿ :)

Dilbert : Costcutting

ಸಾಂಬನ ಆಫೀಸಿನಲ್ಲಿ Cost-Cutting ಸಪ್ತಾಹ ನಡೀತಿದೆ.
ದುರದೃಷ್ಟವಶಾತ್ ಎಲ್ಲ ಲಾಭವೂ ವೆಂಕುಗೆ!!

Thursday, March 09, 2006

೬ ಮತ್ತು ೫ ಅಂಕಿಗಳನ್ನು ಅಂತರಿಕ್ಷದಲ್ಲಿ ಕೂಡುವುದು

ಕಳೆದ ಬಾರಿ ಕೇಶವನನ್ನು ಲೆಕ್ಕದ ಟೆಸ್ಟ್ ನಲ್ಲಿ ಕೂರಿಸಿದೆವು. ಮೊದಲನೇ ಪ್ರಶ್ನೆ ೬+೫=? ಎಂದು. ಇದನ್ನು ಕಂಡು ಹಿಡಿಯಲು ಕೇಶು ಅಂತರಿಕ್ಷಕ್ಕೆ ತೆರಳಿದ. ಈಗ ೬+೫ ಅನ್ನು ಅಂತರಿಕ್ಷದಲ್ಲಿ ನಮ್ಮ ಕೇಶು ಹೇಗೆ ಕೂಡಿಸುತ್ತಾನೆ ಎಂದು ನೋಡೋಣವೇ?

Gafield - ಕಟಾವು

Dilbert : Conference Calls

ವೆಂಕು ಅಲಿಯಾಸ್ ವೆಂಕಟಾಚಲನೇ ಸರಿ ನಮ್ಮ CTC a.k.a ಛೂಪ್ ತಲೆ ಛಾಮಯ್ಯನೋರಿಗೆ ಬುದ್ಧಿ ಕಲಿಸೋಕೆ.ಅವ್ನೋ,ಅವನ ಐಡಿಯಾಗಳೋ...ನೀವೇ ನೋಡಿ :)

Wednesday, March 08, 2006

ಕೇಶು ಕ್ಯಾಪ್ಟೆನ್ ಕೆಂಪಣ್ಣನಾದ...

ಗಣಿತದಲ್ಲಿ ಪ್ರವೀಣನಲ್ಲದಿದ್ದರೂ, ಕೇಶುಗೆ ಬೇರೆ ಏಷ್ಟೋ ವಿಷಯಗಳಲ್ಲಿ ಬಹಳ ಆಸಕ್ತಿ. ತಾನು ಒಬ್ಬ ಅಂತರಜಾಲದ ಮಹಾಯಾನಿಯಾಗಬೇಕೆಂಬ ಆಸೆ. ಇಲ್ಲದಿದ್ದರೆ ಸೂಪರ್ ಮ್ಯಾನ್ ಆಗುವ ಆಸೆ (ಇದನ್ನು ನೀವು ನನ್ನ ಮೊದಲ ಕಾರ್ಟೂನಿನಲ್ಲಿ ನೋಡಬಹುದು) ಹೀಗೆ ಎಂದಾದರೊಮ್ಮೆ ದೊಡ್ಡ ಮನುಷ್ಯನಾಗಲು ಕೇಶು ಆಶಿಸುತ್ತಿದ್ದಾನೆ.

ಈ ಕಳೆದ ಕೆಲ ದಿನಗಳಲ್ಲಿ ಕೆಲವು ಹೊಸ ಪಾತ್ರಗಳ ಪರಿಚಯವಾಗಿದೆ -- ಮೇರಿ ಮೇಡಂ, ಸುಶಿ. ಇದೇ ದಿಟ್ಟಿನಲ್ಲಿ ಇಂದು ಕ್ಯಾಪ್ಟೆನ್ ಕೆಂಪಣ್ಣ. ನೋಡಿ ಆನಂದಿಸಿ :)

Dilbert : ಬೋನಸ್

ಛಾಮಯ್ಯನೋರಿಗೆ ಆಗಾಗ ಈ ರೀತಿಯ ಐಡಿಯಾಗಳು ಬರ್ತಿರತ್ವೆ, ಪಾಪ ಮಂಕಾಗೋದು ಮಾತ್ರ ನಮ್ಮ ಸಾಂಬು.
[ಸ್ವಲ್ಪ ಹಳೇದಾದ್ರೂ ಪರವಾಗಿಲ್ಲ ಅಂತ ಇಲ್ಲಿ ಹಾಕ್ತಿದೀನಿ. ನೋಡಿ ಆನಂದಿಸಿ :)]

Tuesday, March 07, 2006

ಟೆಸ್ಟ್ ನಲ್ಲಿ ಕೇಶು ಸುಶಿಯ ಜೊತೆ...

ಕೇಶು ಸಹಪಾಠಿ ಸುಶಿ ಅಂದರೆ ಸುಶೀಲಾ ಹೆಗಡೆ. ಇವಳು ಕೇಶುವಿನ ತದ್ವಿರುದ್ಧ. ಬುದ್ಧಿವಂತೆ. ಆದರೆ ಯಾವಾಗಲೂ ಕೇಶು ಬಲೆಗೆ ಬೀಳುತ್ತಿರುತ್ತಾಳೆ. ಕೇಶುಗೆ ಇವಳನ್ನು ಪೀಡಿಸದೇ ಇದ್ದಲ್ಲಿ ದಿನ ಮುಂದಕ್ಕೆ ಸಾಗೊಲ್ಲ :)

ಈಗ ಗಣಿತದ ಕಥೆ ಮುಂದುವರೆಸುತ್ತಾ ಕೇಶು -- ಸುಶಿ ಇಬ್ಬರ ಸಂಭಾಶಣೆ

Garfield: ಕೆಲಸಕ್ಕೆ ಬಾರದ ಅಸ್ಂಬದ್ಧ

ನಾವು ಪ್ರತಿಸಲ TV ಮುಂದೆ ಕೂತಾಗ ಇದೇ ಅಲ್ಲವೇ ಮಾಡೋದು :)

Dilbert : ಕಾರ್ಯಕ್ಷಮತೆ

ರಾಜಂ ನಿಜಕ್ಕೂ ಅದೇನ್ ಪಾಪ ಮಾಡಿದ್ನೋ ಇಲ್ಲ ನಮ್ಮ CTC ಅದೇನ್ ಪುಣ್ಯ ಮಾಡಿದ್ನೋ ಬಾಸ್ ಕೆಲಸ ನಿಭಾಯಿಸೋಕೆ!
ಅವನಿಗೆ ಬರೋ revolutionary ಐಡಿಯಾಗಳಿಗಂತು ಕೊರತೆನೇ ಇಲ್ಲ!

Monday, March 06, 2006

ಕೇಶು ಮತ್ತು ಗಣಿತದ ಟೆಸ್ಟ್

ಗಣಿತದಲ್ಲಿ ಪಂಟನಾಗಿರುವ ನಮ್ಮ ಕೇಶು ಈಗ ಗಣಿತದ ಟೆಸ್ಟ್ ಬರೆಯಲು ಸಿದ್ಧನಾಗುತ್ತಿದ್ದಾನೆ...

Dilbert : ಪ್ರಾಕ್ಸಿ

ನಮ್ಮ CTC(PHB) alias ಛಾಮಯ್ಯನೋರಿಗೆ ಪಾಪ ಸಿಕಾಪಟ್ಟೆ ಕೆಲಸ.ಅದಕ್ಕೆ ತಮ್ಮ ಎಲ್ಲ ಸ್ವಂತ ಕೆಲಸಗಳಿಗೆ ರಾಜಂ‍ನ ಸಹಾಯ ತಗೋತಾರೆ ಅಷ್ಟೇ ಪಾಪ.ನೀವೇ ನೋಡಿ!
[ರಾಜಂ : IIT ಹುಡುಗ]

Friday, March 03, 2006

ಕೇಶು ಮತ್ತು ನಾಣಿ

ಕೇಶು ಅಪ್ಪನಿಂದ ಗಣಿತ ಕಲಿತು ಈಗ ನಾಣಿಗೆ ಹೇಳಿಕೊಡುತ್ತಿದ್ದಾನೆ. ಅವರ ಅಪ್ಪನಿಗೆ ಒಂದು ಪ್ರೈಜ್ ಕೊಡಿಸಬೇಕು. ಅಷ್ಟು ಕಷ್ಟ ಪಟ್ಟು ಅವನಿಗೆ ಹೇಳಿ ಕೊಡೂತ್ತಿದ್ದಾರೆ...

ನೋಡಿ ಆನಂದಿಸಿ ಚೆನ್ನಾಗಿ ನಕ್ಕುಬಿಡಿ... ಲಾಫ್ಟರ್ ಥೆರಪಿ *ಹೆಬ್ಬೆರಳು ಮೇಲಕ್ಕೆ*