Search This Blog

Monday, June 12, 2006

ಕೇಶು ನಾಣಿ: ಸಮಯ ಯಂತ್ರ ೩ - ತಿಂಡಿ ಪೋತ ನಾಣಿ

ತಿಂಡಿ ಪೋತ ನಾಣಿ :D. ತಿಂಡಿ ಸಿಕ್ಕಿದರೆ ಎಲ್ಲಿಗೆ ಬೇಕಾದರೂ ಹೋಗೋಕ್ಕೆ ರೆಡಿ.



ಪ್ರತಿಕ್ರಿಯೆ:

ಶ್ರೀ ಅನಾಮಧೇಯರೆ,
ನೀವು ಯಾರು ಅಂತ ನನಗೆ ಗೊತ್ತಿಲ್ಲ. ನೀವು ಕಡೇ ಪಕ್ಷ ನಿಮ್ಮ ಹೆಸರನ್ನಾದರೂ ಬಿಟ್ಟಿದ್ದರೆ ಚೆನ್ನಾಗಿರುತಿತ್ತು. ಸಂಬೋಧಿಸಲು ಸುಲಭವಾಗುತಿತ್ತು. ಏನೇ ಇರಲಿ, ನಿಮ್ಮ ಟೀಕೆಗೆ ಧನ್ಯವಾದಗಳು. ಮೊದಲಿಗೆ ಈ ಕಾರ್ಟೂನುಗಳು ಖಂಡಿತವಾಗಿಯೂ ಮಾಡರ್ನ್ ಆರ್ಟ್ ತರಹ ಅಲ್ಲ. ಇವು ಚಿಕ್ಕ ಮನಸಿನ್ನ ಬಗ್ಗೆ, ಮಕ್ಕಳ ಬಗ್ಗೆ, ಅವರ ವಿಚಾರಗಳ ಬಗ್ಗೆ ಬರೆದ ಕಾರ್ಟೂನುಗಳು. ನೀವು ಒಮ್ಮೆ ಎಲ್ಲಾ ಕಾರ್ಟೂನುಗಳು, ಸ್ಪೆಷಲಾಗಿ ಗಣಿತದ ಸೀರೀಸನ್ನು ಓದಿ ಎಂದು ಪ್ರಾರ್ಥಿಸುತ್ತೇನೆ. ಖಂಡಿತವಾಗಿಯೂ ನ್ಮಗೆ ಹಾಸ್ಯ ವ್ಯಂಗ್ಯ ಎರಡೂ ಕಾಣುತ್ತೆ. ಈ ಕಾರ್ಟೂನುಗಳನ್ನು ಬರೆದವರ ಒದ್ದೇಶವೇ ವ್ಯಂಗ್ಯ. ಅದರಲ್ಲೂ ದೊಡ್ಡವರ ಮನಸ್ಸಿನ ಗೊಂದಲ, ಚಿಕ್ಕವರ/ಮಕ್ಕಳ ಮನಸ್ಸಿನ ಪರಿಚಯ ಜೊತೆಗೆ ಚಿಕ್ಕವರಿಗೂ ದೊಡ್ಡವರಿಗೂ ಮನಸಿನಲ್ಲಿ ಇರುವ ಅಂತರ.
ಇನ್ನೊಂದು ವಿಷಯ. ನೀವು ನಗಲೇ ಬಾರದು ಎಂದು ಈ ಕಾರ್ಟೂನನ್ನು ಓದಿದರೆ ಅದರಲ್ಲಿ ಖಂಡಿತವಾಗಿಯೂ ಹಾಸ್ಯ ಕಾಣಿಸುವುದಿಲ್ಲ. ಸ್ವಲ್ಪ ಮಕ್ಕಳ ಮನಸ್ಸಿನ ದೃಷ್ಟಿಯಲ್ಲಿ ಓದಿದರೆ ಉತ್ತಮ ವಾಗುತ್ತೆ :)

3 comments:

Anonymous said...

ನಮಸ್ಕಾರ ಅರುಣ

ಈ ಕಾರ್ಟೂನ್ ಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಓದಿದ್ದು ನನ್ನ ತಪ್ಪು ಅಂತ ಈಗ ಅನಿಸುತ್ತಿದೆ. ಆರ್.ಕೆ ಲಕ್ಷ್ಮಣ್, ಜನಾರ್ಧನ ಸ್ವಾಮಿ ತರಹದ ಕಾರ್ಟೂನ್‌ಗಳನ್ನು ಇಷ್ಟಪಡುವ ನಾನು ಅವಕ್ಕೆ ಡಿಲ್ಬರ್ಟ್, ವಾಟರ್‌ಸನ್ ಅವರ ಕಾರ್ಟೂನ್ಗಳನ್ನು ತಪ್ಪಾಗಿ ಹೋಲಿಸಿದೆ.

ಇವು ಮಕ್ಕಳಿಗಾಗಿ ಬರೆದವು ಅಂತ ಗೊತ್ತಿರಲಿಲ್ಲ. ಮಕ್ಕಳಿಗೆ ಇವು ಖಂಡಿತಾ ಇಷ್ಟವಾಗುತ್ತೆ. ಖಂಡಿತಾ ಬೇಜಾರು ಮಾಡಿಕೊಳ್ಳಬೇಡಿ. ನಿಮ್ಮ ಪ್ರಯತ್ನ ಮುಂದುವರೆಸಿ.

-ಅನಾಮಧೇಯ

bhadra said...

ನಮಸ್ಕಾರ ಅರುಣ

ನಿನ್ನ ಕಾರ್ಟೂನ್ ಬಹಳ ಚೆನ್ನಾಗಿರುತ್ತದೆ. ನಿನ್ನ ಕೆಲಸ ನೀವು ಮುಂದುವರೆಸುತ್ತಿರು. ಇಷ್ಟು ದಿನ ಕನ್ನಡದ ಕಾರ್ಟೂನ್ ಗಳನ್ನು ನೋಡದೇ ನನ್ನ ಮಗನಿಗೆ ಬೇಜಾರಾಗಿತ್ತು. ಇವತ್ತು ಖುಷಿಯಾಗಿದ್ದಾನೆ. ಇನ್ನೂ ಹೆಚ್ಚು ಹೆಚ್ಚು ಪೋಸ್ಟಿಸುತ್ತಿರು.

Prashanth M said...

super aruna... sakkat aagide.. nippattu ideya joteli - hehe