ಈ ಕಾರ್ಟೂನ್ ಓದುವಾಗ ನನಗೆ ಅನ್ನಿಸಿತು. ಶಾಲೆಗಳಲ್ಲಿ ಮಕ್ಕಳಿಗೆ ಮಗ್ಗಿಯನ್ನು ಗಟ್ಠೊಡೆಯಲು ಹೇಳುತ್ತಾರೆ ನಮ್ಮ ಅಧ್ಯಾಪಕರು. ನನಗೆ ಕೂಡುವುದು ಕಳೆಯುವುದನ್ನು ಶಾಲೆಯಲ್ಲಿ ಹೀಗಿ ಹೇಳಿಕೊಟ್ಟಿದ್ದು -- 10+5=?, 10 in mind, 5 in hand. After 10, 11, 12, 13, 14, 15 ಅಂತ ಕೈಯಲ್ಲಿ ಏಣಿಸುತ್ತಿದ್ದೆ. ಇದರ ಬದಲು ಮಕ್ಕಳಿಗೆ ಹಣ್ಣುಗಳೋ ಅಥವ ಆಟದ ಸಾಮಾನುಗಳ ಜೊತೆ ಕಲಿಸಿದರೆ ಮಕ್ಕಳು ಹುಮ್ಮಸ್ಸಿನಿಂದ ಕಲಿಯುತ್ತಾರೆ ಎಂದು ನನ್ನ ಭಾವನೆ. ಇದು ಅಧ್ಯಾಪಕರ ಮೇಲೆ ಟೀಕೆಯಲ್ಲ. ನಮ್ಮ ಶಿಕ್ಷಣ ಪದ್ದತಿಯ ಮೇಲೆ.
ಮಕ್ಕಳಿಗೆ ಪುಸ್ತಕ ಕೊಟ್ಟು ಎಲ್ಲಾ ಕಲಿ ಎನ್ನುವ ಬದಲು, ಪ್ರಕೃತಿಯ ಜೊತೆಗೂಡಿ ಆಟವಾಡುತ್ತಾ ಕಲಿತು, ಪುಸ್ತಕ ಜ್ಞಾನದ ಜೊತೆ ವ್ಯಾವಹಾರಿಕ ಮತ್ತು ಸಾಮಾಜಿಕ ಜ್ಞಾನವನ್ನೂ ಮೂಡಿಸುವುದು ಮುಖ್ಯ ಎಂದು ನನ್ನ ಭಾವನೆ. ನೀವು ಏನಂತೀರಿ? ಟಿಪ್ಪಣಿಯನ್ನು ಹಾಕಲು ಮರೆಯದಿರಿ
1 comment:
ಕಂಬಿ ಕೀಳ್ತೀನಿ *lol*
Post a Comment