Search This Blog

Tuesday, February 28, 2006

Dilbert : ಮಜಾ

Typical Boss ಲಕ್ಷಣಗಳು ನಮ್ಮ ಚೂಪು ತಲೆ ಛಾಮಯ್ಯನೋರಿಗೆ.ತಲೆ ಕೆರೆದುಕೊಳ್ಳೋ ಪರಿಸ್ಥಿತಿ ಮಾತ್ರ ನಮ್ಮ ಸಾಂಬಶಿವನ ಪಾಡು.

Wednesday, February 22, 2006

ಕೇಶು ಮತ್ತು ಗಣಿತ... ಮುಂದುವರಿಸುತ್ತಾ

ಈ ಕಾರ್ಟೂನ್^ಗಳನ್ನ ಯಾರಾದರು ಓದುತ್ತಿದ್ದಾರ ಎಂದು ತಿಳಿದಿಲ್ಲ... ಆದರೂ ಪೋಶ್ತಿಸುವ ಆಸೆ. ಅದಕ್ಕೇ ಪೊಸ್ಟಿಸುತ್ತಿದ್ದೇನೆ. ಓದುಗರು ಓದಿದ ಮೇಲೆ ಟಿಪ್ಪಣಿ ಹಾಕಿದರೆ ಬಹಳ ಖುಷಿಯಾಗುತ್ತದೆ :)

Friday, February 17, 2006

ಕೇಶು ಮತ್ತು ಗಣಿತ

ಗಣಿತದ ಸೀರೀಸ್ ಮುಂದುವರಿಸುತ್ತಾ...





Tuesday, February 14, 2006

ಕೇಶು ಮತ್ತು ಸಾಪೇಕ್ಷ ಸಿದ್ಧಾಂತ -- Theory of Relativity

ಕೇಶು ನ ದಡ್ಡ ಎಂದುಕೊಂಡಿರೆ? ಸ್ವಲ್ಪ ತಡೆಯಿರಿ. ನಾನು ಮುಂಚೆಯೇ ಹೇಳಿದ ಹಾಗೆ ಕೆಲವು ವುಷಯ ಬಾರದಿದ್ದರೂ ಕೆಲವು ವಿಷಯದಲ್ಲಿ ಕೇಶು ಪರಿಣತ. ಈಗ ನೋಡಿ ನಾಣಿ ಗೆ ಸಾಪೇಕ್ಷ ಸಿದ್ಧಾಂತವನ್ನು (Theory of Relativity) ಹೇಳಿಕೊಡುತ್ತಿದ್ದಾನೆ :)

ಈ ಕಾರ್ಟೂನ್ ಓದುವಾಗ ನನಗೆ ಅನ್ನಿಸಿತು. ಶಾಲೆಗಳಲ್ಲಿ ಮಕ್ಕಳಿಗೆ ಮಗ್ಗಿಯನ್ನು ಗಟ್ಠೊಡೆಯಲು ಹೇಳುತ್ತಾರೆ ನಮ್ಮ ಅಧ್ಯಾಪಕರು. ನನಗೆ ಕೂಡುವುದು ಕಳೆಯುವುದನ್ನು ಶಾಲೆಯಲ್ಲಿ ಹೀಗಿ ಹೇಳಿಕೊಟ್ಟಿದ್ದು -- 10+5=?, 10 in mind, 5 in hand. After 10, 11, 12, 13, 14, 15 ಅಂತ ಕೈಯಲ್ಲಿ ಏಣಿಸುತ್ತಿದ್ದೆ. ಇದರ ಬದಲು ಮಕ್ಕಳಿಗೆ ಹಣ್ಣುಗಳೋ ಅಥವ ಆಟದ ಸಾಮಾನುಗಳ ಜೊತೆ ಕಲಿಸಿದರೆ ಮಕ್ಕಳು ಹುಮ್ಮಸ್ಸಿನಿಂದ ಕಲಿಯುತ್ತಾರೆ ಎಂದು ನನ್ನ ಭಾವನೆ. ಇದು ಅಧ್ಯಾಪಕರ ಮೇಲೆ ಟೀಕೆಯಲ್ಲ. ನಮ್ಮ ಶಿಕ್ಷಣ ಪದ್ದತಿಯ ಮೇಲೆ.

ಮಕ್ಕಳಿಗೆ ಪುಸ್ತಕ ಕೊಟ್ಟು ಎಲ್ಲಾ ಕಲಿ ಎನ್ನುವ ಬದಲು, ಪ್ರಕೃತಿಯ ಜೊತೆಗೂಡಿ ಆಟವಾಡುತ್ತಾ ಕಲಿತು, ಪುಸ್ತಕ ಜ್ಞಾನದ ಜೊತೆ ವ್ಯಾವಹಾರಿಕ ಮತ್ತು ಸಾಮಾಜಿಕ ಜ್ಞಾನವನ್ನೂ ಮೂಡಿಸುವುದು ಮುಖ್ಯ ಎಂದು ನನ್ನ ಭಾವನೆ. ನೀವು ಏನಂತೀರಿ? ಟಿಪ್ಪಣಿಯನ್ನು ಹಾಕಲು ಮರೆಯದಿರಿ :)

Monday, February 13, 2006

ಕೇಶವ ಹೋಮ್^ವರ್ಕ್ ಮಾಡಿದ ಮೇಲೆ...

ಹೋದ ಬಾರಿ ಕೇಶವ ಗಣಿತ ಕಲಿಯುವುದನ್ನು ನೋಡಿದಿರಿ. ಈಗ ಮುಂದೆ :)

Friday, February 10, 2006

ಕೇಶವ ಮತ್ತು ನಾಣಿ -- ಗಣಿತ

ನೀವು ಗಣಿತ ಬಲ್ಲವರೆ? ಹೇಗೆ? ಶಾಲೆಯಲ್ಲಿ ಕಲಿತದ್ದಾ ಅಥವ ಮನೆಯಲ್ಲಿ ಕಲಿತದ್ದ? ಇಲ್ಲ ಸ್ವಂತ ಅಭ್ಯಾಸವೋ?

ಗಣಿತ ಕಲಿಯೋದೇ ಒಂದು ದೊಡ್ಡ ಕೆಲಸ ಎಂದು ಮಕ್ಕಳು ಹೇಳುವುದು ನೀವು ಕೇಳಿರಬಹುದು. ಕೆಲವರಿಗೆ ಗಣಿತವೆಂದರೆ ಸಾಕು ತಲೆ ತಿರುಗುತ್ತೆ, ಕೆಲವರು ಗಣಿತ ಎಂಬ ಶಬ್ದ ಕೇಳಿದೊಡನೆಯೇ ಓಡಿ ಹೋಗ್ತಾರೆ.

ನಿಮ್ಮ ಬಾಲ್ಯದಲ್ಲಿ ನೀವು ಪಟ್ಟ ಶ್ರಮ ಜ್ಞಾಪಿಸಿಕೊಳ್ಳಿ. ಕಷ್ಟ ಪಟ್ಟು, ಬೆವರು ಸುರಿಸಿ,ಅರೆನಿದ್ದೆಯಲ್ಲಿ ಬಿಡದೆ ಗಣಿತವನ್ನು ಕಲಿತು/ಕಲಿಯುತ್ತಿರುವ ಮಕ್ಕಳಿಗೆ ಸಮರ್ಪಿತವಾಗಿ ಈ ಸೀರೀಸ್ :)

ಓದಿ ಹೇಗಿದೆ ಎಂದು ಪ್ರತಿಕ್ರಿಯೆ ನೀಡಿ

Thursday, February 09, 2006

Thursday, February 02, 2006

ಗೋವಿಂದ - Garfield in Kannada

ಬೆಳಿಗ್ಗೆಯಿಂದ ಕೆಲಸದಲ್ಲಿ ಮುಳುಗಿದ್ದು ಮಧ್ಯೆ ಸ್ವಲ್ಪ ಹೊತ್ತು ಕಾರ್ಟೂನ್ಸ್ ಓದಿದ್ರೆ ಮನಸ್ಸು ಒಂಥರಾ ಉಲ್ಲಸಿತವಾಗುತ್ತದೆ. ಬಹಳ ವರ್ಷಗಳಿಂದ ನಾನು Calvin & Hobbes ಮತ್ತು Garfield ಕಾರ್ಟೂನ್ಸ್ ಗಳನ್ನು follow ಮಾಡಿಕೊಂಡುಬಂದಿದ್ದೆ. ಯಾವಾಗ ಅರುಣ Calvin & Hobbes ನ ಕನ್ನಡಕ್ಕೆ ಅನುವಾದಿಸಿದ್ದನ್ನು ನೋಡಿದೆನೋ ನನಗೂ Garfield ನನ್ನು ಗೋವಿಂದನನ್ನಾಗಿಸುವ ಅನ್ನಿಸಿತು. ಜೊತೆಗೆ ಸುಶೀಲನೂ Dilbert ಅನುವಾದ ಪ್ರಾರಂಭಿಸಿದ.

ಒಳ್ಳೆ ಕೆಲಸ ಶುರು ಮಾಡಬೇಕಾದರೆ ಯಾಕೆ ತಡ ಮಾಡಬೇಕು ಅಂತ ಶುರುಮಾಡಿಯೇ ಬಿಟ್ಟೆ. ಕಾರ್ಟೂನ್ಸ್ ಗಳನ್ನು ಓದಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ.